JSW Energy Share Price: ಜೆಎಸ್ಡಬ್ಲ್ಯು ಎನರ್ಜಿ ಸಂಸ್ಥೆಯ ಷೇರು 2020ರ ಮೇ ತಿಂಗಳಲ್ಲಿ 39 ರೂ ಇದ್ದದ್ದು ಇದೀಗ 307 ರೂ ಬೆಲೆಯ ಮಟ್ಟಕ್ಕೆ ಬೆಳೆದಿದೆ. 3 ವರ್ಷಗಳಿಂದ ಇದು ಪಕ್ಕಾ ಮಲ್ಟಿಬ್ಯಾಗರ್ ಎನಿಸಿದೆ. ನವದೆಹಲಿ:ವಿದ್ಯುತ್ ಉತ್ಪಾದನಾ ಕ್ಷೇತ್ರದ ಜೆಎಸ್ಡಬ್ಲ್ಯೂ ಎನರ್ಜಿ ಸಂಸ್ಥೆ (JSW Energy) ಕಳೆದ 3 ವರ್ಷಗಳಿಂದ ಅಪ್ಪಟ ಮಲ್ಟಿಬ್ಯಾಗರ್(Multibagger) ಆಗಿ ಪರಿಣಮಿಸಿದೆ . ಫೆಬ್ರುವರಿ ಕೊನೆಯ ವಾರದಲ್ಲಿ 211 ರೂ ಇದ್ದ ಅದರ ಷೇರುಬೆಲೆ ನಾಲ್ಕೈದು ತಿಂಗಳಲ್ಲಿ ಶೇ . 50 ರಷ್ಟು ಬೆಳೆದಿದೆ . ಜುಲೈ 5 ರಂದು ಅದರ ಬೆಲೆ 300 ರೂ ದಾಟಿತ್ತು . ಇವತ್ತು ( ಜುಲೈ 6) ಜೆಎಸ್ಡಬ್ಲ್ಯೂ ಎನರ್ಜಿ ಸಂಸ್ಥೆಯ ಷೇರುಬೆಲೆ 307 ರೂಗೆ ಹೋಗಿದೆ . ಕಳೆದ 7 ತಿಂಗಳಲ್ಲಿ ಮೊದಲ ಬಾರಿಗೆ ಅದರ ಬೆಲೆ 300 ರೂ ಗಡಿ ದಾಟಿದೆ . ಕಳೆದ 3 ವರ್ಷಗಳಿಂದ ಜೆಎಸ್ಡಬ್ಲ್ಯು ಎನರ್ಜಿ ಸಂಸ್ಥೆ ಅಪೂರ್ವಾಗಿ ಬೆಳೆದಿದೆ. 2020ರ ಮೇ ತಿಂಗಳಲ್ಲಿ ಅದರ ಬೆಲೆ 39 ರೂನಷ್ಟು ಇತ್ತು. ಅಲ್ಲಿಂದೀಚೆ ಮೂರು ಹಂತಗಳಲ್ಲಿ ಷೇರುಬೆಲೆ ಹೈಜಂಪ್ ಮಾಡಿದೆ. ಜೆಎಸ್ಡಬ್ಲ್ಯೂ ಷೇರುಬೆಲೆ ಇತಿಹಾಸ… ಜೆಎಸ್ಡಬ್ಲ್ಯೂ ಎನರ್ಜಿ ಲಿ ಸಂಸ್ಥೆಯ ಷೇರುಬೆಲೆ 2010 ಜನವರಿ 8ರಂದು 113.10 ರೂ ಇತ್ತು. ಆಗ ಇದರ ಷೇರಿನ ಮೇಲೆ ಯಾರಾದರೂ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರುಸಂಪತ್ತು 2,71,441 ರೂ ಆಗುತ್ತಿತ್ತು. 2020ರ ಮೇ ತಿಂಗಳಲ್ಲಿ ಇದರ ಷೇರುಬೆಲೆ 39 ರೂ ಇದ್ದಾಗ 1 ಲಕ್ಷ ರೂ ಹೂಡಿಕೆ ಮಾಡಿದವರಿದ್ದರೆ ಅವರ ಷೇರುಸಂಪತ್ತು ಇವತ್ತು 7.87 ಲಕ್ಷ ರೂ ಆಗುತ್ತಿತ್ತು. ಅಂದರೆ 3 ವರ್ಷದಲ್ಲಿ ಷೇರುಸಂಪತ್ತು ಹೆಚ್ಚುಕಡಿಮೆ 8 ಪಟ್ಟು ವೃದ್ದಿಸುತ್ತಿತ್ತು. 2020 ಮೇ ತಿಂಗಳಿಂದ 2021 ಅಕ್ಟೋಬರ್ವರೆಗೆ ಜೆಎಸ್ಡಬ್ಲ್ಯೂ ಎನರ್ಜಿ ಷೇರುಬೆಲೆ ಭರ್ಜರಿ ಜಿಗಿತ ಕಂಡಿತ್ತು. 39 ರೂ ಇದ್ದ ಅದರ ಬೆಲೆ 2022ರ ಅಕ್ಟೋಬರ್ 14ಕ್ಕೆ 394 ರೂಪಾಯಿಗೆ ಜಿಗಿದಿತ್ತು. 16 ತಿಂಗಳಲ್ಲಿ ಅದರ ಬೆಲೆ 10 ಪಟ್ಟು ಹೆಚ್ಚಾಗಿತ್ತು. ಜೆಎಸ್ಡಬ್ಲ್ಯೂ ಎನರ್ಜಿ ಸಂಸ್ಥೆಯ ಷೇರನ್ನು ತಾಂತ್ರಿಕವಾಗಿ ನೋಡುವುದಾದರೆ, ಅದರ ಆರ್ಎಸ್ಐ (ರಿಲೇಟಿವ್ ಸ್ಟ್ರೆಂತ್ ಇಂಡೆಕ್ಸ್) 66.9ರಲ್ಲಿ ಇದೆ. ಅಂದರೆ ಸರಿ ಮಟ್ಟದಲ್ಲಿ ಅದರ ವಹಿವಾಟು ನಡೆಯುತ್ತಿರುವುದರ ಸಂಕೇತ ಅದು. ಷೇರುಮಾರುಕಟ್ಟೆ ತಜ್ಞರು ಮತ್ತು ಏಜೆನ್ಸಿಗಳ ಪ್ರಕಾರ ಇದರ ಬೆಲೆ 330 ರೂವರೆಗೂ ಹೋಗಬಹುದು.